
18th April 2025
ಮಲ್ಲಮ್ಮ ನುಡಿ ವಾರ್ತೆ
ಚಿಟಗುಪ್ಪ:- ಬೀದರನಲ್ಲಿ ಪತ್ರಕರ್ತ ರವಿ ಬಸವರಾಜ ಭೂಸಂಡೆ ಅವರ ಮೇಲೆ ಅಮಾನವೀಯವಾಗಿ ವರ್ತಿಸಿ ಹಲ್ಲೆ ಮಾಡಿರುವ ನಾಲ್ಕು ಜನ ಅರಣ್ಯ ಇಲಾಖೆಯ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿವುದರ ಜತೆಗೆ ಅವರನ್ನು ಸೇವೆಯಿಂದ ವಜಾ ಮಾಡುವಂತೆ ಆಗ್ರಹಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ತಹಸಿಲ್ದಾರ ಮಂಜುನಾಥ ಪಂಚಾಳ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ದಸ್ತಗೀರ, ಶಾಂತಕುಮಾರ, ಗಜಾನಂದ ಹಾಗೂ ಸಂಗಮೇಶ ಎಂಬುವವರು ಪತ್ರಕರ್ತ ರವಿ ಭೂಸಂಡೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಮತ್ತು ಕಾಲರ ಪಟ್ಟಿ ಹಿಡಿದು ಎಳೆದಾಡಿರುವ ವಿಡಿಯೋ ವೈರಲ್ ಆಗಿದ್ದು ಈ ಅಮಾನವೀಯ ಘಟನೆಗೆ ಕಾರಣರಾದವರನ್ನು ಈ ಕೂಡಲೇ ಕರ್ತವ್ಯದಿಂದ ಅಮಾನತುಗೊಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡುವ ಮೂಲಕ ರಾಜ್ಯ ವ್ಯಾಪಿ ಹೋರಾಟ ನಡೆಸಲಾಗುವುದು ಎಂದರು. ಚಿಟಗುಪ್ಪ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ ಗಂಜಿ, ಹುಮನಾಬಾದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೂರ್ಯೋಧನ ಹೂಗಾರ, ಉಪಾಧ್ಯಕ್ಷ ಕೃಷ್ಣಾಚಾರ ಪಂಚಾಳ, ಪ್ರಧಾನ ಕಾರ್ಯದರ್ಶಿ ಸೈಯದ ಮುಸ್ತಫಾ ಖಾದ್ರಿ, ಪತ್ರಕರ್ತರಾದ ರಾಜಕುಮಾರ ಆರ್. ಹಡಪದ, ವಿದ್ಯಾಸಾಗರ ಕಟ್ಟಿಮನಿ, ಮೊಯಿಯೋದ್ದಿನ ಲಾಥೋಡಿ, ಸೈಯದ ಅಜೀಮ, ಸಲಾವುದ್ದಿನ ಸಿದ್ದಿಕ, ಸಂಗಮೇಶ ಜವಾದಿ, ಗುಂಡು ಅತಿವಾಳ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಇನ್ನುಳಿದ ಮೂವರನ್ನು ಸಹ ಅಮಾನತು ಮಾಡಿ: ಬಂಗ್ಲೆ ಮಲ್ಲಿಕಾರ್ಜುನ್
ಸಂವಿಧಾನ ಶಿಲ್ಪಿ ಡಾ,ಬಿ,ಆರ್,ಅಂಬೇಡ್ಕರವರ ೧೩೪ ನೇಯ ಜಯಂತೋತ್ಸವ ಅದ್ದೂರಿ ಸಂಭ್ರಮದ ಮೇರವಣಿಗೆ!!
ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ಏ.೨೦ ಕೂಡಲಸಂಗಮದಲ್ಲಿ ಪಂಚಮಸಾಲಿ ಸಮಾಜದ ರಾಜ್ಯಮಟ್ಟದ ಸಭೆ